ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು [Kavirajamarga Mattu Kannada Jagattu]

ग्रन्थनाम [Book Name]               - ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು
                                                      [Kavirajamarga Mattu Kannada Jagattu]

लेखकः [Author]                           - के.वी. सुब्बन्ना [K V Subbanna]

प्रकाशकः [Publisher]                  - अक्षरा प्रकाशनम् [Akshara Prakashana]

भाषा [Language]                         - कन्नड [ಕನ್ನಡ]

विचारः [Topic]                             - 

आकारः [Size]                             पुटाः [Pages] - 

ग्रन्थविवरणम् [Description]         - ‘ಕವಿರಾಜಮಾರ್ಗ’ವು, ತನ್ನ ಕಿರುಭಾಷೆಯ ಅಂಗೈನೆಲದಲ್ಲಿ ಪ್ರಪಂಚಜಗತ್ತನ್ನು ಆವಾಹಿಸಿ ಅರಗಿಸಿಕೊಂಡು ಕನ್ನಡವೆಂಬ ನಿಸ್ಸೀಮೆಯ ಪ್ರತಿಜಗತ್ತನ್ನು ಹೇಗೆ ಸೃಷ್ಟಿಸಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. ‘ಕವಿರಾಜಮಾರ್ಗ’ ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಮನೋಜ್ಞವಾಗಿ ಬಣ್ಣಿಸುತ್ತದೆ. ‘ಕಾವೇರಿಯಿಂದಂ-ಆ - ಗೋದಾವರಿವರಂ - ಇರ್ದ - ನಾಡು - ಅದು ಆ ಕನ್ನಡದೊಳ್‌ಭಾವಿಸಿದ ಜನಪದಂ’. ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು ‘ಭಾವಿತ’ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ -- ಆ ಚಿಪ್ಪಿನ ಒಳಗೆ ಎನ್ನಿ -- ‘ಭಾವಿತ’ ವಾದದ್ದು. ಅಂದರೆ, ‘ಕನ್ನಡ’ ವೆಂಬುದು ಒಂದು ಚಿತ್-ಜಗತ್ತು, ಒಂದು ಕಣಸು, ದರ್ಶನ; ಮೊದಲು ಚಿತ್ - ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ಮಿತಗೊಂಡಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಷ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ವು ಆ ವಸುಧಾವಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ ‘ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ -- ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, ‘ವಸುಧಾವಲಯ ವಿಲೀನ, ವಸುಧೆಯ ಒಳಗಿನ ಒಂದು ಕಿರುಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ್ಗ’ವು ಕಂಡರಿಸಿಟ್ಟಿದೆ.

Write a review

Please login or register to review

ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು [Kavirajamarga Mattu Kannada Jagattu]

  • Availability: 2 - 3 DAYS
  • Views: 1335
  • Model: AKSPRAKAN020
प्रकाशकः [Publisher] अक्षरा प्रकाशनम् [Akshara Prakashana]
लेखकः [Author] के.वी. सुब्बन्ना [K V Subbanna]
भाषा [Language] कन्नड [ಕನ್ನಡ]
  • Rs. 120.00
  • Ex Tax: Rs. 120.00

Tags: Kavirajamarga Mattu Kannada Jagattu, K V Subbanna, Akshara Prakaashana

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00